ಅಟಲ್‌ ಕೈಯ್ಯಲ್ಲಿ ಅರಳಿದ ಮೋದಿ

ಶ್ಮ‌¾ಶಾನಧಿದಲ್ಲಿ ಬಂದ ಆ ಫೋನು ಹಿಂದೂಸ್ಥಾನದ ರಾಜಕಾರಣದ ನಕ್ಷೆಯನ್ನೇ ಬದಲಿಸಿಬಿಟ್ಟಿತು
ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ ಅವರ ಕುರಿತ “ಸೋಲೊಪ್ಪಲಾರೆ, ಅಚಲ ಬದುಕೊಂದರ ಕತೆ’ – ಅನುವಾದಿತ ಕೃತಿಯನ್ನು ಬೆಂಗಳೂರಿನ ಪ್ರಿಸಮ್‌ ಬುಕ್ಸ್‌ ಪ್ರಕಟಿಸಿದೆ. ಈ ಕೃತಿಯ ಆಯ್ದ ಅಧ್ಯಾಯಗಳ ಭಾಗಗಳು ನಿಮ್ಮ ಓದಿಗಾಗಿ…

2001ರ ಅಕ್ಟೋಬರ್‌ನ ಒಂದು ಬೆಳಗ್ಗೆ. ವಾತಾವರಣದಲ್ಲಿ ಇನ್ನೂ ಬಿಸಿಯಿತ್ತು. ಹೀಗಿದ್ದರೂ ಕಪ್ಪು$ಮೌನವೊಂದು ಹರಡಿಧಿಕೊಂಡಿತ್ತು. ಮುಖಗಳೆಲ್ಲ ಪರಸ್ಪರ ಪ್ರಶ್ನೆ ಮಾಡುತ್ತಿವೆ ಯೇನೋ ಎನ್ನುವಂತಿದ್ದವು. ಆದರೆ ಉತ್ತರ ಮಾತ್ರ ಇರಲಿಲ್ಲ. ದೆಹಲಿಯ ಶ್ಮಶಾನ ಗೃಹದಲ್ಲಿ ಚಿತೆಯೊಂದು ಉರಿಯುತ್ತಿತ್ತು. ಖಾಸಗಿ ಸುದ್ದಿವಾಹಿನಿಯೊಂದರ ಕ್ಯಾಮೆರಾಮೆನ್‌ ಗೋಪಾಲ್‌ ಬಿಷ್ಟ್ರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಕೆಲವು ಪತ್ರಕರ್ತ ಮಿತ್ರರು ಹಾಗೂ ಒಂದಿಬ್ಬರು ರಾಜಕಾರಣಿಗಳು ಅಲ್ಲಿದ್ದರು. ಅಂತಿಮ ಸಂಸ್ಕಾರ ನಡೆಯುತ್ತಿತ್ತು. ಆಗ ರಾಜಕೀಯ ನಾಯಕಧಿರೊಬ್ಬರ ಮೊಬೈಲ್‌ ಫೋನು ಸದ್ದು ಮಾಡಿತು. ಅವರಿಗೆ ಪ್ರಧಾನಮಂತ್ರಿ ನಿವಾಸದಿಂದ ಫೋನು ಬಂದಿತ್ತು.
ಫೋನು ಮಾಡುತ್ತಿದ್ದವರು ಕೇಳಿದರು, “ಎಲ್ಲಿದ್ದೀರಿ?’
ಫೋನು ಎತ್ತಿಕೊಂಡವರು ಹೇಳಿದರು, “ಶ್ಮಶಾನದಲ್ಲಿದ್ದೇನೆ.’
ಫೋನು ಮಾಡುತ್ತಿದ್ದವರು ಹೇಳಿದರು, “ಬಂದು ಭೇಟಿಯಾಗಿ.’
ಇಷ್ಟು ಮಾತಾಡಿದ್ದಾದ ಮೇಲೆ ಫೋನು ಕಟ್ಟಾಯಿತು. ಸ್ಮಶಾನಧಿದಲ್ಲಿ ಬಂದ ಆ ಫೋನು ಹಿಂದೂಸ್ಥಾನದ ರಾಜಕಾರಣದ ನಕ್ಷೆಧಿಯನ್ನೇ ಬದಲಿಸಿಬಿಟ್ಟಿತು.
ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಾಧವರಾವ್‌ ಸಿಂಧ್ಯಾ ಇದ್ದ ವಿಮಾನ ದೆಹಲಿಯಿಂದ ಕಾನ್‌ಪುರ್‌ಗೆ ಹೊರಟಿತ್ತು. ಅದು ಅಪಘಾತಕ್ಕೀಡಾಗಿತ್ತು. ಗೋಪಾಲ್‌ ಬಿಷ್ಟ್ ಕೂಡ ಅದರಲ್ಲಿದ್ದರು. 2001ರ ಸೆಪ್ಟೆಂಬರ್‌ 30ರ ಮಧ್ಯಾಹ್ನ 1 ಗಂಟೆ 50 ನಿಮಿಷ. ಆಗ ವಿಮಾನವು ಮೈನ್‌ಪುರಿಯಲ್ಲಿ ಇಳಿಯ ಬೇಕಿತ್ತು. ಆದರೆ ಸುಮಾರು 1 ಗಂಟೆ 35 ನಿಮಿಷದ ಹೊತ್ತಿಗೆ ವಿಮಾನವು ಅಪಘಾತಕ್ಕೀಡಾಯಿತು. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಎಂಟು ಮಂದಿ ಅಸುನೀಗಿದರು. ಸಿಂಧ್ಯಾರಲ್ಲದೆ ವಿಮಾನದ ಪೈಲಟ್‌, ಸಿಂಧ್ಯಾರ ಆಪ್ತ ಸಹಾಯಕ ರೂಪಿಂದರ್‌ ಸಿಂಹ, ಮೂವರು ಪತ್ರಕರ್ತರಾದ – “ಇಂಡಿಯನ್‌ ಎಕ್ಸ್‌ಪ್ರೆಸ್‌’ನ ಸಂಜೀವ್‌ ಸಿನ್ಹಾ, “ಹಿಂದೂಸ್ಥಾನ್‌ ಟೈಮ್ಸ್‌’ನ ಅನು ಶರ್ಮಾ, “ಆಜ್‌ತಕ್‌’ನ ರಂಜನ್‌ ಝಾ ಮತ್ತು ಕ್ಯಾಮೆರಾಮೆನ್‌ ಗೋಪಾಲ್‌ ಬಿಷ್ಟ್.
ಟಿವಿ ಚಾನಲ್ಲುಗಳಲ್ಲಿ ಸಿಂಧ್ಯಾರವರ ಬಗ್ಗೆ ಕಾರ್ಯಕ್ರಮಗಳು ಪುಂಖಾನುಪುಂಖವಾಗಿ ಬಿತ್ತರಗೊಳ್ಳುತ್ತಿದ್ದವು. ಪ್ರತಿಯೊಬ್ಬರೂ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದರು. ಆದರೆ ಅವರೊಡನೆ ದುರ್ಮರಣಕ್ಕೀಡಾದ ಬಾಕಿ ಏಳು ಜನರನ್ನು ಕೇಳುವವರೇ ಇರಲಿಲ್ಲ. ಅವರುಗಳಿಗೆ ಶ್ರದ್ಧಾಂಜಲಿ ಅರ್ಪಿಸಲು ಪುರುಸೊತ್ತೇ ಇರಲಿಲ್ಲ. ಚಾನಲ್ಲುಗಳಲ್ಲಿ ಎಲ್ಲೋ ಒಂದು ಕಡೆ ಚಿಕ್ಕದಾಗಿ ಸುದ್ದಿ ಬಂತಷ್ಟೆ. ಮಾರನೇ ದಿನ ಪತ್ರಿಕೆಗಳು ಕೂಡ ಸಿಂಧ್ಯಾಮಯಧಿವಾಗಿದ್ದವು. ಪ್ರತಿಯೊಬ್ಬ ರಾಜಕಾರಣಿ ಗ್ವಾಲಿಯರ್‌ಗೆ ಹೋಗಲು ಬಯಸುತ್ತಿದ್ದ. ಹೀಗಿರುವಾಗ ರಾಜಕಾರಣಿಯೊಬ್ಬರು ಯಾವುದೋ ಕ್ಯಾಮೆರಾಮೆನ್‌ನ ಅಂತಿಮ ಸಂಸ್ಕಾರಕ್ಕೆ ಹೋಗುಧಿವುದು ದೊಡ್ಡ ವಿಷಯವೇ ಆಗಿತ್ತು.
ಆ ರಾಜಕಾರಣಿಯೇ ನರೇಂದ್ರ ಮೋದಿ. ಕೇಶೂಭಾಯಿ ಪಟೇಲರ ವಿರೋಧಿಗಳ ಜೊತೆ ಕೈ ಜೋಡಿಸಿದ ಹಾಗೂ ಕೇಶೂಭಾಯಿಯವರ ವೈರವನ್ನು ಕಟ್ಟಿಕೊಂಡ, ಗುಜರಾತಿನ ಭಾರತೀಯ ಜನತಾ ಪಾರ್ಟಿಯ ನಾಯಕರಾದ ನರೇಂದ್ರ ಮೋದಿ. ಆ ದಿನಗಳಲ್ಲಿ ಅವರು ದೆಹಲಿಯ ಅಶೋಕ ರಸ್ತೆಯಲ್ಲಿರುವ ಬಿಜೆಪಿಯ ಹಳೆಯ ಕಚೇರಿಯ ಹಿತ್ತಲಲ್ಲಿ ಕಟ್ಟಿದ್ದ ಸಣ್ಣ ಕೋಣೆಯೊಂದರಲ್ಲಿ ಇರುತ್ತಿದ್ದರು. ಅದರಲ್ಲಿದ್ದ ಫ‌ರ್ನಿಚರ್‌ಗಳೆಂದರೆ ಒಂದು ಮಣೆ ಮತ್ತು ಎರಡು ಕುರ್ಚಿಗಳು ಅಷ್ಟೆ. ಆಗ ಪಾರ್ಟಿಯಲ್ಲಿ ಪ್ರಮೋದ್‌ ಮಹಾಜನ್‌, ಸುಷ್ಮಾ ಸ್ವರಾಜ್‌ ಮತ್ತು ಅರುಣ್‌ ಜೇಟಿÉಯಂತಹ ನಾಯಕರುಗಳ ಪ್ರಭಾವ, ಪ್ರತಾಪ ಜಾಸ್ತಿ ಇತ್ತು.
ಅರ್ಧ ತೋಳಿನ ಕುರ್ತಾ ಮತ್ತು ಪೈಜಾಮ ತೊಟ್ಟು ನರೇಂದ್ರ ಮೋದಿಯವರು ಉರಿಯುತ್ತಿರುವ ಚಿತೆಯನ್ನು ನೋಡುತ್ತಿ ದ್ದರು. ಆಗಲೇ ಅವರಿಗೆ ಪ್ರಧಾನಿ ವಾಜಪೇಯಿಯವರ ಫೋನು ಬಂದಿದ್ದು. ಆ ರಾತ್ರಿ ಮೋದಿಯವರು ಅಟಲ್‌ ಬಿಹಾರಿ ವಾಜಪೇಯಿಯವರ ನಿವಾಸಕ್ಕೆ ಹೋದರು. ಅವರಿಗೊಂದು ಹೊಸ ಜವಾಬ್ದಾರಿ ವಹಿಸಲಾಯಿತು. ಅದೇ ಗುಜರಾತ್‌ಗೆ ಹೋಗುವ ಜವಾಬ್ದಾರಿ. ಪಾರ್ಟಿಯ ದಿಗ್ಗಜರೂ, ಗುಜರಾತಿನ ಮುಖ್ಯಮಂತ್ರಿಯೂ ಆದ ಕೇಶೂಭಾಯಿ ಪಟೇಲರನ್ನು ಬದಿಗೆ ಸರಿಸಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಜವಾಬ್ದಾರಿ ವಹಿಸಲಾಯಿತು.
ಪಾರ್ಟಿಯ ಹೈಕಮಾಂಡ್‌ ಮತ್ತು ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿಯವರ ಒಂದು ತೀರ್ಮಾನದಿಂದ ನರೇಂದ್ರ ಮೋದಿಯವರ ರಾಜಕೀಯ ಕೆರಿಯರ್‌ ಇದ್ದಕ್ಕಿದ್ದಂತೆ ಹೀಗೆ ಬದಲಾಗುವುದೆಂದು ಆಗ ಬಹುಶಃ ಯಾರೂ ಯೋಚಿಸಿರಲೇ ಇಲ್ಲವೇನೋ!
ಇದೂ ಸರಿಯೇ, ಅದೂ ಸರಿಯೇ!
ಸೋಲು ಗೆಲುವುಗಳನ್ನು ಕುರಿತು ಅವರು ಸದಾ ಇದೇ ಮಾತನ್ನು ಹೇಳುತ್ತಿದ್ದರು ಮತ್ತು ತಮ್ಮ ಜೀವನವನ್ನು ವಾಜಪೇಯಿಯವರು ಹೀಗೇ ಬದುಕುತ್ತಾ ಬಂದರು. ಅವರು ಏಳು ಬೀಳುಗಳ ಲೆಕ್ಕವೇ ಇಡಲಿಲ್ಲ. ಸೋತಾಗ ಆಯಾಸಗೊಂಡು ನಿರಾಶರಾಗಿ ಕೂಡಲಿಲ್ಲ. ಗೆದ್ದಾಗ ಬೀಗಲೂ ಇಲ್ಲ. 1984ರ ಚುನಾವಣೆಗಳಲ್ಲಿ ಬಿಜೆಪಿಯು ಸೋತು ಕೇವಲ ಎರಡೇ ಎರಡು ಸೀಟು ಸಿಕ್ಕಾಗಲೂ ವಾಜಪೇಯಿಯರ ಮುಖದಲ್ಲಿ ಅದೇ ಬಾಲ ಸಹಜ ಮುಗುಳ್ನಗೆ ಇತ್ತು. 1996ರಲ್ಲಿ ಪ್ರಧಾನಮಂತ್ರಿ ಆಗುವ ಅಸಾಧ್ಯವಾದ ಗುರಿ ತಲುಪಿದಾಗಲೂ ಅಷ್ಟೇ, ಮತ್ತು 2004ವರೆಗೆ ದೇಶದ ಅತ್ಯಂತ ಜನಪ್ರಿಯ ಪ್ರಧಾನಮಂತ್ರಿ ಅನ್ನಿಸಿಕೊಂಡು ಸೋತಾಗಲೂ ಅಷ್ಟೇ.
ವಾಜಪೇಯಿಯವರನ್ನು ತಿಳಿಯಬೇಕಾದರೆ ಅವರನ್ನು ಓದಲೇಬೇಕಾಗಿದೆ. 1963ರ ಡಿಸೆಂಬರ್‌ನಲ್ಲಿ “ನವನೀತ’ ಪತ್ರಿಕೆಯ ಅಂಕಣದಲ್ಲಿ ವಾಜಪೇಯಿಯವರ ಲೇಖನವೊಂದು ಪ್ರಕಟವಾಧಿಗಿತ್ತು. “ರಾಜಕಾರಣದ ಇಳಿಜಾರು ಹಾದಿಯಲ್ಲಿ’ ಎಂಬ ಆ ಲೇಖನದಲ್ಲಿ ಅವರು ಬರೆಯುತ್ತಾರೆ, “ನಾನು ಮಾಡಿದ ಅತಿ ದೊಡ್ಡ ತಪ್ಪೆಂದರೆ ರಾಜಕೀಯಕ್ಕೆ ಬಂದಿದ್ದು. ಏನಾದರೂ ಓದಿಧಿಕೊಂಡು ಪಾಠ ಮಾಡಬೇಕೆಂಬ ಆಸೆಯಿತ್ತು. ಗತ ಸಮಯದಿಂದ ಏನಾದರೂ ಕಲಿತು ಭವಿಷ್ಯಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದುಕೊಂಡಿದ್ದೆ. ಆದರೆ ರಾಜಕೀಯದ ಇಳಿಜಾರು ಹಾದಿಯಲ್ಲಿ ಗಳಿಸುವುದು ದೂರವೇ ಉಳಿಯಿತು. ಗಂಟಿನ ಸಂಪತ್ತೆಲ್ಲ ಕಳೆದುಕೊಂಡೆ. ಮನಸ್ಸಿನಲ್ಲಿ ಶಾಂತಿ ಸತ್ತು ಹೋಯಿತು. ವಿಚಿತ್ರವಾದೊಂದು ಟೊಳ್ಳುತನ ಜೀವನದಲ್ಲಿ ತುಂಬಿಕೊಂಡಿತು. ಮಮತೆ ಮತ್ತು ಕರುಣೆಯ ಮಾನವೀಯ ಮೌಲ್ಯಗಳು ಮುಖವನ್ನು ಕದಿಯತೊಡಗಿವೆ. ಕ್ಷಣಿಕವೇ ಶಾಶ್ವತವಾಗಿ ರೂಪುಗೊಳ್ಳುತಿದೆ. ಜಡತೆಯನ್ನೇ ಶಾಶ್ವತವೆಂದು ತಿಳಿದು ನಡೆಯುವ ಪ್ರವೃತ್ತಿ ಬೆಳೆಯುತ್ತಿದೆ.’
“ಇವತ್ತಿನ ರಾಜಕಾರಣವು ವಿವೇಕವನ್ನಲ್ಲ, ವಾಕ್‌ಚಾತುರ್ಯಧಿವನ್ನು ಬೇಡುತ್ತಿದೆ. ಸಂಯಮವನ್ನಲ್ಲ ಅಸಹಿಷ್ಣುತೆಗೆ ಪ್ರೋತ್ಸಾಹ ನೀಡುತ್ತಿದೆ. ಗಳಿಸುವಿಕೆಯ ಹಿಂದೆ ಅಲ್ಲ ಲೂಟಿಯ ಹಿಂದೆ ಹುಚ್ಚರಂತೆ ಅಲೆದಿದ್ದಾರೆ. ಮತಭೇದವನ್ನು ಗೌರವಿಸುವುದಿರಲಿ ಅದನ್ನು ಸಹಿಸುವ ಪ್ರವೃತ್ತಿ ಕೂಡ ನಶಿಸಿಹೋಗುತ್ತಿದೆ. ಎಲ್ಲರೂ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಓಡಾಡುತ್ತಿದ್ದಾರೆ. ಉತ್ತರಾಧಿಕಾರದ ಪಗಡೆಯಾಟದಲ್ಲಿ ಕಾಯಿಗಳನ್ನು ಜರುಗಿಸುವ ಚಿಂತೆಯಲ್ಲಿ ಮಗ್ನರಾಗಿದ್ದಾರೆ. ಇಷ್ಟೆಲ್ಲ ಆಗುತ್ತಿದ್ದರೂ ರಾಜಕಾರಣವನ್ನು ಬಿಡುತ್ತಿಲ್ಲ. ಚಟದಂತೆ ಅಂಟಿಕೊಂಡುಬಿಟ್ಟಿದೆ. ಹಾವು ಸೊಂಡಿಲಿಗಳ ಗತಿಯಾಗಿದೆ. ಇತ್ತ ನುಂಗಲೂ ಆಗದು. ಅತ್ತ ಉಗುಳಲೂ ಆಗದು.’
ವಾಜಪೇಯಿಯವರು ಸಂಪೂರ್ಣ ವ್ಯಕ್ತಿವಾದಿಯೂ ಅಲ್ಲ, ಸಂಪೂರ್ಣ ಸಮಾಜವಾದಿಯೂ ಅಲ್ಲ. ಸರಿಯಾಗಿ ಹೇಳಬೇಧಿಕೆಂದರೆ ಅವರು ವ್ಯಕ್ತಿವಾದಿ ಹಾಗೂ ಸಮಾಜವಾದಿ ಎರಡೂ ಆಗಿದ್ದಾರೆ. ವಾಜಪೇಯಿಯವರೊಳಗಿನ ಕವಿಯು ಹಿಂದೆಯೇ ಸರಿದು ಹೋದದ್ದಂತೂ ಸತ್ಯವಾಗಿದೆ. ರಾಜಕಾರಣಿಯು ಮುಂದೆ ಮುಂದೆ ಹೋಗಿಬಿಟ್ಟ. ಹಿರಿಯ ಪತ್ರಕರ್ತರಾದ ನೀನಾ ವ್ಯಾಸರು ಹೇಳುತ್ತಾರೆ, “ವಾಜಪೇಯಿಯವರ ರಾಜಕೀಯ ಜೀವನದಲ್ಲಿ ಅನೇಕ ಬಾರಿ ಏಳು – ಬೀಳುಗಳು ಆದವು. ರಾಜಕೀಯ ನನಗಲ್ಲ ಎಂಬಂತಹ ಅನೇಕ ಸನ್ನಿವೇಶಗಳು ಒದಗಿ ಬಂದವು.’ ಬಾಬರಿ ಮಸೀದಿ ಬಿದ್ದನಂತರ ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಬೈಠಕ್‌ ಇತ್ತು. ಈ ಬೈಠಕ್‌ನಲ್ಲಿ ವಾಜಪೇಯಿಯವರ ಭಾಷಣದ ನಂತರ ಅನೇಕಸಾರಿ ಅವರ ವಿರುದ್ಧ ಕೂಗುಗಳೆದ್ದವು. ಸಭೆಯಿಂದ ಈಚೆ ಬಂದಾಗ “ತಾವು ಇಂಥ ಸಂದರ್ಭಗಳಲ್ಲಿ ಬಿಜೆಪಿಯನ್ನೇಕೆ ತ್ಯಜಿಸುವುದಿಲ್ಲ….?’ ಎಂದು ಮಹಿಳಾ ಪತ್ರಕರ್ತೆಯೊಬ್ಬರು ಕೇಳಿದರು. ತಮ್ಮ ಚಿರಪರಿಚಿತ ಕಾವ್ಯಮಯ ಶೈಲಿಯಲ್ಲಿ ವಾಜಪೇಯಿಯವರು, “ಜಾಯೆ ತೋ.. ಜಾಯೆ ಕಹಾಂ..?’ ಎಂದು ಗುನುಗುತ್ತಾ ಹೊರಟುಹೋದರು.
“ಎಲ್ಲಿಯವರೆಗೆ ಗಂಗೋತ್ರಿಯ ನೀರು ಶುದ್ಧಿಯಾಗುವುದಿಧಿಲ್ಲವೋ ಅಲ್ಲಿಯವರೆಗೆ ಪ್ರತಿ ಮನೆಯ ಕೊಳಾಯಿ ನೀರು ಶುದ್ಧಿಯಾಗದು. ಭ್ರಷ್ಟಾಚಾರವನ್ನು ಮೇಲ್ಮಟ್ಟದಲ್ಲಿ ಮೊದಲು ನಿರ್ಮೂಲ ಮಾಡಬೇಕಿದೆ. ಇವತ್ತು ಮೂರು ವಸ್ತುಗಳ ಕಡೆ ಎಲ್ಲರ ಗಮನವಿದೆ – ದುಡ್ಡು, ಪದವಿ ಮತ್ತು ಪ್ರತಿಷ್ಠೆ. ಜನರ ನಾಲಿಗೆ ಉದ್ದವಾಗಿಬಿಟ್ಟಿದೆ. ಹೃದಯ ಚಿಕ್ಕದಾಗಿ ಬಿಟ್ಟಿದೆ ಹಾಗೂ ಜೇಬು ದೊಡ್ಡದಾಗಿ ಬಿಟ್ಟಿದೆ’ ಎಂದು ವಾಜಪೇಯಿಯವರು ಭ್ರಷ್ಟಾಚಾರಧಿವನ್ನು ನಿಯಂತ್ರಿಸಲು ಈ ರೀತಿ ಯಾವಾಗಲೂ ಹೇಳುತ್ತಿದ್ದರು.

ಹಿಂದಿ ಮೂಲ: ವಿಜಯ್‌ ತ್ರಿವೇದಿ
ಕನ್ನಡಕ್ಕೆ: ಸಿ. ವಿ. ಶೇಷಾದ್ರಿ ಹೊಳವನಹಳ್ಳಿ

Leave a Reply

अन्य समाचार

5 बार की वर्ल्ड कप चैंपियन ऑस्ट्रेलिया को मिली सेमीफाइनल में हार, बन गया विश्व रिकॉर्ड

पांच बार की वर्ल्ड कप चैंपियन ऑस्ट्रेलिया को पहली बार वर्ल्ड कप के सेमीफाइनल में हार मिली है। बर्मिंघम के एजबेस्टन मैदान पर खेले गए वर्ल्ड कप 2019 के दूसरे सेमीफाइनल में इंग्लैंड ने ऑस्ट्रेलिया को इकतरफा मैच [Read more...]

ಅಟಲ್‌ ಕೈಯ್ಯಲ್ಲಿ ಅರಳಿದ ಮೋದಿ

ಶ್ಮ‌¾ಶಾನಧಿದಲ್ಲಿ ಬಂದ ಆ ಫೋನು ಹಿಂದೂಸ್ಥಾನದ ರಾಜಕಾರಣದ ನಕ್ಷೆಯನ್ನೇ ಬದಲಿಸಿಬಿಟ್ಟಿತುಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ ಅವರ ಕುರಿತ "ಸೋಲೊಪ್ಪಲಾರೆ, ಅಚಲ ಬದುಕೊಂದರ ಕತೆ' - ಅನುವಾದಿತ ಕೃತಿಯನ್ನು ಬೆಂಗಳೂರಿನ ಪ್ರಿಸಮ್‌ ಬುಕ್ಸ್‌ ಪ್ರಕಟಿಸಿದೆ. ಈ ಕೃತಿಯ ಆಯ್ದ ಅಧ್ಯಾಯಗಳ ಭಾಗಗಳು ನಿಮ್ಮ ಓದಿಗಾಗಿ... 2001ರ ಅಕ್ಟೋಬರ್‌ನ ಒಂದು ಬೆಳಗ್ಗೆ. ವಾತಾವರಣದಲ್ಲಿ ಇನ್ನೂ ಬಿಸಿಯಿತ್ತು. [Read more...]

मुख्य समाचार

5 बार की वर्ल्ड कप चैंपियन ऑस्ट्रेलिया को मिली सेमीफाइनल में हार, बन गया विश्व रिकॉर्ड

पांच बार की वर्ल्ड कप चैंपियन ऑस्ट्रेलिया को पहली बार वर्ल्ड कप के सेमीफाइनल में हार मिली है। बर्मिंघम के एजबेस्टन मैदान पर खेले गए वर्ल्ड कप 2019 के दूसरे सेमीफाइनल में इंग्लैंड ने ऑस्ट्रेलिया को इकतरफा मैच [Read more...]

ऑस्ट्रेलिया बनाम इंग्लैंड, विश्व कप 2019 सेमीफाइनल मैच 2: कब कहां और कैसे देखें लाइव मैच

मौजूदा चैम्पियन आस्ट्रेलिया की टीम आज यहां एजबेस्टन क्रिकेट ग्राउंड पर आईसीसी विश्व कप-2019 के दूसरे सेमीफाइनल में मेजबान इंग्लैंड से भिड़ेगी। आस्ट्रेलियाई टीम वर्ष 1975, 1987, 1996, 1999, 2003, 2007 और 2015 के फाइनल में पहुंच चुकी है, जिसमें [Read more...]

उपर