ಆರ್‌ಟಿಇ ಉಪಯೋಗ ಬಡವರಿಗಿಲ್ಲ

ಆರ್‌.ಟಿ.ಇ. ಬಡವರ ಮಕ್ಕಳಿಗೆ ಉತ್ತಮ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುವ ಸಲುವಾಗಿ ರೂಪುಗೊಂಡಿದ್ದರೂ ಈಗ ನಗರಗಳಲ್ಲಿ ವಾಸ ಮಾಡುವ ಕೆಲವರಿಗಷ್ಟೆ ಉಪಯೋಗವಾಗುವ ಮಟ್ಟಕ್ಕೆ ತಲಪಿದೆ. ಈ ಹಿಂದಿನ ಆದೇಶಗಳಲ್ಲಿ ವಿದ್ಯಾರ್ಥಿಯು ತಾನು ವಾಸಿಸುವ ಸ್ಥಳದ ಸುತ್ತಮುತ್ತಲಿನ 5 ಕಿ.ಮೀ. ವರೆಗಿನ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಈಗ ಅದನ್ನು ಮಾರ್ಪಡಿಸಿ ಆಯಾ ಗ್ರಾಮಗಳಿಗೆ ಮತ್ತು ವಾರ್ಡ್‌ಗಳಿಗೆ ಸೀಮಿತಗೊಳಿಸಲಾಗಿದೆ. ಅಕಸ್ಮಾತ್‌ ಈ ಸ್ಥಳಗಳಲ್ಲಿ ಒಳ್ಳೆಯ ಶಾಲೆಗಳು ಇಲ್ಲದಿದ್ದಲ್ಲಿ ವಿದ್ಯಾರ್ಥಿಯು ಇರುವ ಸರಕಾರಿ ಶಾಲೆಗಳಿಗೇ ಸೇರಿಕೊಳ್ಳಬೇಕು. ಈ ನಿಯಮದಿಂದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಾರೆ. ಸರಕಾರ ಈ ಬಗ್ಗೆ ನೀತಿ ಮಾರ್ಪಡಿಸಿ ಆಯಾ ತಾಲೂಕು ಅಥವಾ ಹೋಬಳಿ ಮಟ್ಟದಲ್ಲಿ ಇರುವ ಶಾಲೆಗಳಿಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಸಂಬಂಧಪಟ್ಟವರು ಈ ಕುರಿತು ಗಮನಹರಿಸಲಿ.
ಸಜಿಪಮೂಡ ಎಂ.ಬ್ಯಾರಿ

Leave a Reply

अन्य समाचार

test

[Read more...]

ಪ್ರಬಂಧ ಸ್ಪರ್ಧೆ

ಮೈಸೂರಿನ ವೇಣುಗೋಪಾಲ ಹಾಗೂ ಶೈಲಜಾ ದಂಪತಿ ಬರೆದಿರುವ "ಭುವನದ ಭಾಗ್ಯ - ಎಂ ಎಸ್‌' ಕೃತಿಯ ಬಗ್ಗೆ 15 ನಿಮಿಷದಲ್ಲಿ ಓದಬಹುದಾದಷ್ಟು ಗಾತ್ರದ ಕನ್ನಡ ಪ್ರಬಂಧವನ್ನು ಉಭಯ ಜಿÇÉೆಗಳ 25 ವರ್ಷ ವಯಸ್ಸಿಗಿಂತ ಕಿರಿಯ ಸಂಗೀತಾಸಕ್ತರಿಂದ ಆಹ್ವಾನಿಸಲಾಗಿದೆ.ಮೊದಲ ಉತ್ತಮ ಮೂರು ಪ್ರಬಂಧಗಳಿಗೆ ಬಹುಮಾನವಿದ್ದು, ಪ್ರಥಮ ಬಹುಮಾನ ವಿಜೇತರಿಗೆ ದಿನಾಂಕ 12.08.2018ರಂದು ಮಂಗಳೂರಿನಲ್ಲಿ ನಡೆಯಲಿರುವ ಹಿರಿಯ ಕಲಾ [Read more...]

मुख्य समाचार

उपर